0
  ಸಂಪರ್ಕ    ಸುದ್ದಿಜಾಲ    ಎನ್‌ಆರ್‌ಐ    ಅಂಕಣ    ಚಲನಚಿತ್ರ    ಸಾಹಿತ್ಯ    ಅಡುಗೆ    ವಿಶ್ವಕನ್ನಡ ಸಮ್ಮೇಳನ    ಚೌಚೌ    ಗ್ಯಾಲರಿ    ಕಾಮಸೂತ್ರ    Font Help  
ವಾರ್ತೆಗಳು ಕ್ರೀಡೆ ಯಡ್ಡಿ ಆಡಳಿತ ರಾಜಕೀಯ ವಾಟ್ಸ್ ಹಾಟ್ ಐಟಿ-ಬಿಟಿ ಬೆಂಗಳೂರು ಸಭೆ ಸಮಾರಂಭ ಸುದ್ದಿ-ಚಿತ್ರ
 ಮುಖಪುಟ  »  ಸುದ್ದಿಜಾಲ »  ವಾರ್ತೆಗಳು

ಸಮ್ಮೇಳನ ಯಾತಕ್ಕೆ, ಯಾರ್ಯಾರು ಬರುತ್ತಾರೆ?
ಗುರುವಾರ, ಜನವರಿ 1, 1970 Hrs (IST)  
thatsKannada RSS feed thatsKannada iGoogle gadgets Free SMS Alerts in Kannada   ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ   thatsKannada Bookmark


ಸೆಪ್ಟೆಂಬರ್‌ 1, 2 ಹಾಗೂ 3ರಂದು ಜಗತ್ತಿನ ಕನ್ನಡ ಪ್ರೇಮಿಗಳು ಹೂಸ್ಟನ್‌ನ ಸುಂದರ ನಗರಿ ಟೆಕ್ಸಾಸ್‌ನಲ್ಲಿ ಸೇರಲಿದ್ದಾರೆ. ಹೂಸ್ಟನ್‌, ಡಲ್ಲಾಸ್‌, ಸ್ಯಾನ್‌ ಆ್ಯಂಟೋನಿಯೋ ಹಾಗೂ ಆಸ್ಟಿನ್‌ನ ಟೆಕ್ಸಾಸ್‌ ಕನ್ನಡ ಕೂಟಗಳು ಮತ್ತು ಅಮೆರಿಕೆಯ ಕನ್ನಡ ಕೂಟಗಳ ಒಕ್ಕೂಟ (ಎಕೆಕೆಎ) ಸೇರಿ ಆಯೋಜಿಸಿರುವ ವಿಶ್ವ ‘ಸಹಸ್ರಮಾನದ ಕನ್ನಡ ಸಮ್ಮೇಳನ 2000’ದ ರಸದೂಟ ಸವಿಯಲಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಆಸಕ್ತಿ, ಒಲವು ನಿಮಗಿದ್ದರೆ ನೀವೂ ಸಮ್ಮೇಳನಕ್ಕೆ ಹೋಗಬಹುದು.

ಸಮ್ಮೇಳನದ ಉದ್ದೇಶಗಳು

  • ಹೊಸ ಶತಮಾನದಲ್ಲಿ ಕನ್ನಡಿಗರ ಸಾಂಸ್ಕೃತಿಕ ಧ್ಯೇಯ, ಹೆಬ್ಬಯಕೆಗಳನ್ನು ಬಿಂಬಿಸುವುದು
  • ಜಗತ್ತಿನ ಎಲ್ಲಾ ಕನ್ನಡ ಕೂಟಗಳ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು. ವಿವಿಧ ಕೂಟಗಳು ಒಟ್ಟಾಗಿ ಸೇರಿ ಕನ್ನಡ ಚಟುವಟಿಕೆಗಳನ್ನು ಕೈಗೊಳ್ಳುವ ಬಗೆಗೆ ಮಾತನಾಡುವುದು
  • ಕನ್ನಡಿಗರ ಪ್ರತಿಭೆ ಹಾಗೂ ನಾಯಕತ್ವದ ಅಭಿವೃದ್ಧಿಗೆ ಅವಕಾಶ ಕಲ್ಪಿಸುವುದು ಹಾಗೂ ಉದ್ಯಮಗಳಲ್ಲಿ ಕನ್ನಡಿಗರ ಸಾಧನೆಯನ್ನು ಆಚರಿಸುವುದು
  • ಕನ್ನಡ ಕೋರ್ಸುಗಳನ್ನು ಪ್ರಾರಂಭಿಸುವಂತೆ ಹಾಗೂ ಕನ್ನಡ ಕೇಂದ್ರಗಳನ್ನು ತೆರೆಯುವಂತೆ ವಿಶ್ವವಿದ್ಯಾಲಯಗಳನ್ನು ಪ್ರೇರೇಪಿಸುವುದು
  • ಕನ್ನಡಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಯುವಕರನ್ನು ಪ್ರೋತ್ಸಾಹಿಸುವುದು
ಸಮ್ಮೇಳನ ನಡೆಯುವುದು ಹೂಸ್ಟನ್‌ನಲ್ಲಿ ಎಲ್ಲಿ ? ಇಳಿದುಕೊಳ್ಳುವುದೆಲ್ಲಿ ?

ಹೂಸ್ಟನ್‌ ನಗರಿಯ ಪ್ರಸಿದ್ಧ ಜಾರ್ಜ್‌ ಆರ್‌. ಬ್ರೌನ್‌ ಸಮಾವೇಶ ಕೇಂದ್ರದಲ್ಲಿ ಸಮ್ಮೇಳನ ನಡೆಯಲಿದೆ. ಮಾತುಕತೆ, ಚರ್ಚೆ ಹಾಗೂ ತಂಗಲು ಹತ್ತಿರದ ಡಬಲ್‌ಟ್ರೀ ಹಾಗೂ ಹಯಾತ್‌ ರೀಜೆನ್ಸಿ ಹೂಸ್ಟನ್‌ ಹೊಟೇಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.

ಆಮಂತ್ರಿತ ಅತಿಥಿಗಳು

  1. ವಿ.ಎಸ್‌. ರಮಾದೇವಿ, ಕರ್ನಾಟಕದ ರಾಜ್ಯಪಾಲರು
  2. ಎಸ್‌.ಎಂ. ಕೃಷ್ಣ , ಕರ್ನಾಟಕದ ಮುಖ.್ಯಮಂತ್ರಿಗಳು (ಸಮಾರಂಭವನ್ನು ಉದ್ಘಾಟಿಸುವರು)
  3. ಎಂ.ವಿ. ವೆಂಕಟಪ್ಪ , ಕರ್ನಾಟಕ ವಿಧಾನಸಭಾ ಸ್ಪೀಕರ್‌
  4. ರಾಣಿ ಸತೀಶ್‌, ಕನ್ನಡ ಮತ್ತು ಸಂಸ್ಕೃತಿ ಸಚಿವೆ
  5. ಆರ್‌.ವಿ. ದೇಶಪಾಂಡೆ, ಭಾರೀ ಕೈಗಾರಿಕೆ ಸಚಿವ
  6. ಕೆ.ಸಿ. ರಾಮಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷ
  7. ಡಾ. ಯು.ಆರ್‌. ಅನಂತಮೂರ್ತಿ, ಆಹ್ವಾನಿತ ಭಾಷಣಕಾರರು
  8. ಗಿರೀಶ್‌ ಕಾರ್ನಾಡ್‌, ಆಹ್ವಾನಿತ ಭಾಷಣಕಾರರು
  9. ಸುಧಾ ನಾರಾಯಣ ಮೂರ್ತಿ, ಇನ್‌ಫೋಸಿಸ್‌ ಫೌಂಡೇಷನ್‌
  10. ಪ್ರೊ. ಶ್ರೀನಿವಾಸ ಕುಲಕರ್ಣಿ- ಕಾಲ್‌ಟೆಕ್‌, ಸಿಎ
  11. ಬಿ.ವಿ. ಜಗದೀಶ್‌- ಎಕ್ಸೋಡಸ್‌, ಐಎನ್‌ಸಿ. ಸಿಎ
  12. ಕುಮಾರ್‌ ಮಳವಳ್ಳಿ- ಬ್ರೋಕೇಡ್‌, ಐಎನ್‌ಸಿ. ಸಿಎ
  13. ಜಿ.ವಿ. ಕುಲಕರ್ಣಿ- ಸಾಹಿತಿಗಳು, ಕರ್ನಾಟಕ
  14. ಪ್ರೊ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ- ಕವಿ, ಕರ್ನಾಟಕ
  15. ನಾಗತಿಹಳ್ಳಿ ಚಂದ್ರಶೇಖರ್‌- ಚಲನಚಿತ್ರ ನಿರ್ದೇಶಕರು, ಕರ್ನಾಟಕ
  16. ಮಾಧವ ಗುಡಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು
  17. ವಿನಾಯಕ ತೊರವಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರು
  18. ಸಿ. ಅಶ್ವತ್ಥ್‌- ಕುವೆಂಪು ಸಾಹಿತ್ಯದ ಸುಗಮ ಸಂಗೀತ ಸಾಕ್ಷಾತ್ಕಾರ
Click here to go to top
ಮುಖಪುಟ / ಸಹಸ್ರಮಾನದ ವಿಶ್ವ ಕನ್ನಡ ಸಮ್ಮೇಳನ


 ನಿಮ್ಮ ಅಭಿಪ್ರಾಯ
[ ಅಭಿಪ್ರಾಯ ಪ್ರಕಟಿಸಿ ]


ಇಂಥದ್ದು ಬೇರೆಲ್ಲೂ ಸಿಗದು
 
 
 ಕೋಟಿಗೂ ಹೆಚ್ಚು ವಧುವರರು ಇಲ್ಲಿದ್ದಾರೆ
 ಬಾಳಸಂಗಾತಿ ಹುಡುಕಿಕೊಳ್ಳಲು ಮುಕ್ತ ಅವಕಾಶ
 ಮೊಬೈಲ್‌ನಲ್ಲಿ ಕನ್ನಡ ಸುದ್ದಿಗಾಗಿ SMS START KNNEWS 09845298452
 ನಿಮ್ಮ ನಗರದಲ್ಲಿ ಯಾವ ಸಿನೆಮಾ ಎಲ್ಲಿದೆ?
 ಲೈಂಗಿಕತೆ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ
 ಇಂಗ್ಲಿಷಲ್ಲಿ ತಿರುಕ್ಕುರಲ್ ಲಭ್ಯ
ThatsKannada
ಚಲನಚಿತ್ರ
ThatsKannada
ThatsKannada
ThatsKannada
ThatsKannada
ತಾಜಾ ಸುದ್ದಿಗಳು
ThatsKannada
ನಿಮ್ಮ ಅಮೂಲ್ಯ ಮತ ಚಲಾಯಿಸಿ
Have you downloaded the new Google Chrome browser?
Yes
No
    

Results | Previous Results

Recommended Links
     SMS Updates      Astrology      Chat      RSS      Post Free Classifieds      Online Shopping & Auctions      Jobs      Explore India