ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರದಕ್ಷಿಣೆ ಕಾಟ : ಗಂಡಸರಿಗೆ ಇಲ್ಲಿದೆ ಸಹಾಯ ವಾಣಿ !

By Staff
|
Google Oneindia Kannada News

ವರದಕ್ಷಿಣೆ ಕಾಟ : ಗಂಡಸರಿಗೆ ಇಲ್ಲಿದೆ ಸಹಾಯ ವಾಣಿ !
ಮಹಿಳಾ ಸಹಾಯವಾಣಿ ಮಾದರಿಯಲ್ಲಿ ಇದು ಪುರುಷರ ಸಹಾಯವಾಣಿ. ಶೋಷಿತ ಗಂಡಂದಿರ ಪಾಲಿನ ಆಶಾಕಿರಣ. (080) 3500895 ನಂಬರಿಗೆ ಫೋನಾಯಿಸಿ, ವರದಕ್ಷಿಣೆ ಕಾಟದ ಸುಳ್ಳು ದೂರು ಕೊಟ್ಟು ಪೀಡಿಸುವ ಹೆಂಗಸರಿಗೆ ಬುದ್ಧಿ ಕಲಿಸಬಹುದು.

ಬೆಂಗಳೂರು : ವರದಕ್ಷಿಣೆ ಕಿರುಕುಳದ ನೆವವೊಡ್ಡಿ ಗಂಡ, ಅತ್ತೆ- ಮಾವಂದಿರನ್ನು ಗಿರಗಿಟ್ಟಲೆ ಆಡಿಸುವ ಹೆಂಗಸರೂ ಉಂಟು. ಅದಕ್ಕಾಗೇ ಬೆಂಗಳೂರಲ್ಲಿ ವರದಕ್ಷಿಣ ಕಾಟ ಅನುಭವಿಸುವ ಗಂಡಸರಿಗೆ ಹೊಸ ಸಹಾಯವಾಣಿ ಶುರುವಾಗಿದೆ.

ಮಂಗಳವಾರ ಮತ್ತು ಶುಕ್ರವಾರ ರಾತ್ರಿ 7ರಿಂದ 9 ಗಂಟೆವರೆಗೆ (080) 3500895 ನಂಬರಿಗೆ ಫೋನಾಯಿಸಿ, ಶೋಷಿತ ಗಂಡಸರು ಗೋಳು ತೋಡಿಕೊಳ್ಳಬಹುದು. ಪರಿಹಾರ ಸೂಚಿಸುವ ಕೆಲಸವನ್ನು ಯೋಗ್ಯ ಸಿಬ್ಬಂದಿ ಮಾಡುತ್ತಾರೆ.

ಭಾರತೀಯ ದಂಡ ಸಂಹಿತೆ (ಐಪಿಸಿ) 498 ಎ ಸೆಕ್ಷನ್ನು ಮತ್ತು ವರದಕ್ಷಿಣೆ ನಿರ್ಮೂಲನಾ ಕಾಯ್ದೆ ಶೋಷಣೆಗೊಳಗಾಗುವ ಹೆಂಗಸರನ್ನು ರಕ್ಷಿಸುವ ಮಟ್ಟಕ್ಕೆ ರಚಿತವಾಗಿವೆ. ಆದರೆ, ಇದೇ ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡು ಗಂಡನನ್ನೇ ಗೋಳು ಗುಟ್ಟಿಸುವ ಹೆಂಗಸರಿಗೆ ಬುದ್ಧಿ ಕಲಿಸಲು ಯಾವುದೇ ಕಾಯಿದೆ ಇಲ್ಲ.

ಅದಕ್ಕೇ ಈಗ ಸಹಾಯ ವಾಣಿ ಹುಟ್ಟಿರುವುದು. ದೆಹಲಿಯ ನ್ಯಾಯಮೂರ್ತಿ ಜೆ.ಡಿ.ಕಪೂರ್‌ ವರದಕ್ಷಿಣೆ ವಿರೋಧಿ ಕಾನೂನುಗಳ ದುರ್ಬಳಕೆಯ ಅನೇಕ ಪ್ರಕರಣಗಳನ್ನು ನೆನಪಿಸುತ್ತಾರೆ. ಏನೂ ತಪ್ಪೇ ಮಾಡದ ಗಂಡ, ಹೆಂಡತಿ ಕೊಡುವ ವರದಕ್ಷಿಣೆ ಕಿರುಕುಳದ ಒಂದೇ ಒಂದು ಸುಳ್ಳು ದೂರಿನಿಂದ ಜೀವನವಿಡೀ ನರಳಿರುವುದನ್ನು ಅವರು ನೋಡಿದ್ದಾರೆ. ಅವಿಭಕ್ತ ಕುಟುಂಬದಲ್ಲಿ ಇರೋಕಾಗದೆ ಮನೆ ಮುರಿದು, ತನ್ನದೇ ಮನೆ ಹೂಡುವ ಸಲುವಾಗಿ ವರದಕ್ಷಿಣೆ ಕಿರುಕುಳದ ದೂರು ಕೊಟ್ಟು, ಮುಗ್ಧರ ಗೋಳು ಹೊಯ್ದುಕೊಂಡಿರುವ ಹೆಂಗಸರೂ ಕಪೂರ್‌ ಅವರಿಗೆ ಗೊತ್ತು. ಹಳೆ ಪ್ರೇಮಿಯ ಸೇರಲು ಒಲ್ಲದ ಗಂಡನ ಮೇಲೆ ವರದಕ್ಷಿಣೆ ಗೂಬೆ ಕೂಡಿಸಿ, ನರಕ ಯಾತನೆ ಕೊಟ್ಟ ರಾಕ್ಷಸಿಯರ ಅವತಾರವೂ ಗೊತ್ತು.

ಕಪೂರ್‌ ಅವರ ಸಲಹೆಯ ಮೇರೆಗೆ ಕೆಲವರು ಸೇರಿ ಈ ಸಹಾಯ ವಾಣಿಯನ್ನು ಶುರು ಮಾಡಿದ್ದಾರೆ. ಅವರು ಯಾರೆಂದು ಗೊತ್ತಾಗಬೇಕಾದರೆ, ಸಹಾಯ ವಾಣಿಗೆ ಕರೆ ಮಾಡಿ.

(ಇನ್ಫೋ ವಾರ್ತೆ)

ಪೂರಕ ಓದಿಗೆ-
ಕೇಳಿದಿರಾ ಕೇಳಿದಿರಾ....ಗಂಡಸರಿಗೆ ವರದಕ್ಷಿಣೆ ಕಿರುಕುಳ !

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X