ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿ ಮನೆಯಲ್ಲಿ ಕೀರ್ತಿನಾಥರ ಸ್ಮರಣೆ

By Staff
|
Google Oneindia Kannada News

ಹರಿ ಮನೆಯಲ್ಲಿ ಕೀರ್ತಿನಾಥರ ಸ್ಮರಣೆ
ಸಾಂಸ್ಕೃತಿಕ ರಾಜಧಾನಿಯಲ್ಲಿ ಸಾಂಸ್ಕೃತಿಕ ಲೋಕದ ಸಾಧಕನಿಗೆ ಶ್ರದ್ಧಾಂಜಲಿ

ಕೀರ್ತಿಶೇಷ ಕೀರ್ತಿನಾಥ ಕುರ್ತಕೋಟಿಯವರ ಅಚಾನಕ್‌ ಸಾವಿನ ಕುರಿತ ದಿಗ್ಭ್ರಮೆ ಸಾರಸ್ವತ ಲೋಕವನ್ನು ಇನ್ನೂ ಆವರಿಸಿರುವಾಗಲೇ, ಕುರ್ತಕೋಟಿಯವರ ಸ್ಮರಣೆಯ ಕಾರ್ಯಕ್ರಮಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿವೆ. ವಿವಿಧ ಕ್ಷೇತ್ರಗಳ ಗಣ್ಯರು ಕುರ್ತಕೋಟಿಯವರ ಸಾಧನೆಗಳನ್ನು ನೆನೆದು, ಅಪ್ರತಿಮ ಸಾಧಕನ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಮೈಸೂರಿನಲ್ಲಿ ಆಗಸ್ಟ್‌ ಮೊದಲ ತೇದಿಯಂದು, ಶುಕ್ರವಾರ- ಸಾರಸ್ವತ ಲೋಕದ ಪ್ರಮುಖರು ಹಿರಿಯ ವಿದ್ವಾಂಸ ಎಸ್‌.ಕೆ.ಹರಿಹರೇಶ್ವರರ ಸರಸ್ವತಿಪುರಂನಲ್ಲಿನ ಮನೆಯಲ್ಲಿ ಸಭೆ ಸೇರಿ ಕುರ್ತಕೋಟಿಯವರ ನಿಧನದ ಕುರಿತು ಕಂಬನಿ ಮಿಡಿದರು. ಹಿರಿಯ ಸಾಹಿತಿಯ ಸಾವಿಗೆ ಸಾಂಸ್ಕೃತಿಕ ರಾಜಧಾನಿಯ ಸಹೃದಯಿಗಳು ಸ್ಪಂದಿಸಿದ ಕಾರ್ಯಕ್ರಮವದು.

Prof. Keerthinatha Kurthakotiಹರಿಹರೇಶ್ವರ ಹಾಗೂ ನಾಗಲಕ್ಷ್ಮಿ ದಂಪತಿಗಳು ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಕುರ್ತಕೋಟಿ ದಂಪತಿಗಳ ಸಾವಿನ ಕುರಿತು ಶೋಕ ವ್ಯಕ್ತಪಡಿಸಲಾಯಿತು. ಚಿಕಾಗೊದ ವಿದ್ಯಾರಣ್ಯ ಕನ್ನಡಕೂಟದ ಮಾಜಿ ಅಧ್ಯಕ್ಷ ಶ್ರೀನಿವಾಸ ಭಟ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮ.ಗು. ಸದಾನಂದಯ್ಯ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರೊ.ರಾಘವೇಂದ್ರ ಭಟ್‌, ಡಾ.ಕೆ.ಎಸ್‌.ಭಗವಾನ್‌, ಪ್ರೊ.ರಾಜಪುರೋಹಿತ್‌, ಪ್ರೊ. ಸಿ.ನಾಗಣ್ಣ , ಕೆ.ಆರ್‌.ಮೋಹನ್‌ ಹಾಗೂ ಹರಿಹರೇಶ್ವರ ಅವರು ಕುರ್ತಕೋಟಿಯವರ ವಿಮರ್ಶನ ಕಾರ್ಯಗಳನ್ನು ನೆನೆದರು.

ಮೈಸೂರಿನ ಬರಹಗಾರರಾದ ಡಾ.ನಿ.ಗಿರಿಗೌಡ, ಎಚ್‌.ಆರ್‌. ಲೀಲಾವತಿ ರಘುರಾಮ್‌, ಡಾ.ಪಂಡಿತಾರಾಧ್ಯ, ಎಚ್‌ಎಂಟಿಯ ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕ ರಾಮಾನುಜಂ, ಶ್ಯಾಮಲಾ ಮೂರ್ತಿ, ಭಾರತಿ ಪ್ರಕಾಶನದ ಶ್ರೀನಿವಾಸ್‌, ಉಮಾ ರಾಮಚಂದ್ರ, ಕೇಶವ, ಜಯಪ್ಪ ಹೊನ್ನಾಳಿ, ಮುಳಿಯ ತಿಮ್ಮಪ್ಪಯ್ಯನವರ ಪುತ್ರ, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಸಂಧ್ಯಾ ರವೀಂದ್ರನಾಥ್‌ರ ‘ಮರಳಿ ಬರುವೆ ನಾ ಮತ್ತು ಇತರ ಕಥೆಗಳು’ ಕಥ ಸಂಕಲನವನ್ನು ನೀಡಲಾಯಿತು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X